Nov 2, 2013

ಹಣತೆ ಹಚ್ಚೋಣ


ಹಣತೆ ಹಚ್ಚೋಣ
ನನ್ನೊಳಗಿನ ಹಣತೆಯಿಂದ ನಿನ್ನ
ನಿನ್ನೊಳಗಿನ ಹಣತೆಯಿಂದ ನನ್ನ
ನಮ್ಮೊಳಗಿನ ಅನಂತ ಅಂಧಕಾರವ ದಾಟಿ
ದೀಪ ಬೆಳಗೋಣ

ಮಾನವತೆಯ ಬೆಳಗುವ
ಮನಸ್ಸು ಮನಸ್ಸುಗಳ ಬೆಸೆವ
ಬೆಳಕು ಬೀರೋಣ

ಜ್ಯೋತಿಯ ಕಿಡಿ ಜಗತ್ತನ್ನು ಬೆಳಗಲಿ
ಜೀವ ಆರಿಸುವುದು ಬೇಡ

ಬನ್ನಿ ಹಣತೆ ಹಚ್ಚೋಣ
ನಮ್ಮೊಳಗಿನ ದೀಪ ಬೆಳಗೋಣ

No comments:

Post a Comment