Aug 25, 2013

ಕೊನೆಯ ಪುಟದ ಸಾಲುಗಳು













ದಿನಗಳು ಉರುಳುರುಳಿ
ಲೆಕ್ಕ ಸಿಗದೆ ಓಡುತಿರುವಾಗ
ಬಿಡದಿದ್ದರೆ ಮೈಗೆ ಹಿಡಿದ ಚಳಿ
ಅರಿವಾಗುವುದು ಈ ದಿನಗಳು ಕೈತಪ್ಪಿ ಹೋದಾಗ


ಯೋಚನಾ ಲಹರಿ ಬೆಳೆಯುತ್ತಿದೆ
ಬೆಟ್ಟದಷ್ಟು.. ಹಳೆಯ ಆಲದ ಮರದಷ್ಟು
ಅಳೆಯಲಾಗುತ್ತಿಲ್ಲ ಎತ್ತರ
ಹುಡುಕಲಾಗದು ಮೂಲ ಬೇರ

ತುಮುಲಗಳ ನಡುವೆ ಅರಿಯದ ಆಕರ್ಷಣೆ
ತಿಳಿಯದೆ ಪಡೆವ ಆಪ್ತತೆ
ಬೆವರಿಳಿಸುತ್ತಿದೆ ಕೆಲಸವಿಲ್ಲದೆ
ನಡುಕ ಹುಟ್ಟಿಸುತ್ತಿದೆ ಸನಿಹದಲ್ಲಿ ಕಾಯುತ್ತಿರುವ ಬದಲಾವಣೆ!

ಚಿತ್ತ ಚಾಂಚಲ್ಯದಿ ಭೌತಿಕವೇ ಬೂದಿ
ಮೂಲವೆ ನೆಲಬಿಟ್ಟು ನೆಲೆಸಿಗದೆ ಜಂಗಮವಾಗಿರುವಾಗ
ಸ್ಥಾವರದ ಸ್ಥಿರತೆಯ ಸಿದ್ಧಿ ಸಿದ್ಧರಿಗೂ ಅಸಾಧ್ಯ
ನಾನೊಬ್ಬ ಸಾಮಾನ್ಯ ನನಗದೆಲ್ಲಿ ಸಾಧ್ಯ?

ನಾನೊಬ್ಬ ಸಾಮಾನ್ಯ ನನಗದೆಲ್ಲಿ ಸಾಧ್ಯ?
ನನಗದೆಲ್ಲಿ ಸಾಧ್ಯ?
ಎಲ್ಲಿ ಸಾಧ್ಯ?
ಸಾಧ್ಯ? ಸಾಧ್ಯ! ಸಾಧ್ಯ.

No comments:

Post a Comment