Feb 25, 2013

ನನಗೂ ರಕ್ತ ಕೊಡಿ

ರಕ್ತ ಬೇಕಿದೆ ರಕ್ತ ಬೇಕಿದೆ
ಯುವಜನತೆಗೆ ಕೊಡಲು ರಕ್ತ ಬೇಕಿದೆ

ಆಳುವ ಧಣಿಗಳ ಕಾಣದ ಕೈಗಳು
ಜಾಗತೀಕರಣದ ಗಣಕಯಂತ್ರಗಳು
ಬೆಳೆಯುವ ಮಕ್ಕಳ ನವಯುಗ ಯುವಕರ
ರಕ್ತ ಹೀರುತಿದೆ ಕಾಣಣ್ಣ
ವಿಷವನು ತುಂಬಿದೆ ನೋಡಣ್ಣ
ಭ್ರಷ್ಟರ ಮಾಡಿದೆ ಓ ಅಣ್ಣ
ಶಕ್ತಿ ಕುಂದುತಿದೆ ತಿಳಿಯಣ್ಣ

ಹೆತ್ತವರಿಗೆ ಗತಿಯಿಲ್ಲ ಕೂಳು
ಮಕ್ಕಳ ಕೈಗೆ ಎರಡು ಮೊಬೈಲು
ಬಾಟಲಿ ತಂಬಾಕು ಸಿಗರೇಟು ಕೊಟ್ಟು
ದೇಶದ ಆಯುಷ್ಯ ಕೊಂದಾರ
ಮಾರಕ ರೋಗವ ತಂದಾರ
ಸ್ವತಂತ್ರ ಸ್ಮಶಾನ ಮಾಡ್ಯಾರ
ದೇಶವ ಸುಡುಗಾಡು ಮಾಡ್ಯಾರ

ನಮಗೆ ಬೇಡ ಮಂದ ರಕ್ತ
ಬೇಡವೆ ಬೇಡ ಮತೀಯ ರಕ್ತ
ಭ್ರಷ್ಟರ ರಕ್ತ ಕಪ್ಪುರಕ್ತ ಮನವನು ಕದಡುವ ಹಳದಿ ರಕ್ತ
ಬೇಕಾಗಿರುವುದು ಶುದ್ಧರಕ್ತ
ಐಕ್ಯತೆಗಾಗಿ ಕುದಿಯುವ ರಕ್ತ
ಬದಲಾವಣೆಯ ಬಿಸಿ ಬಿಸಿ ರಕ್ತ
ಕ್ರಾಂತಿಕಾರಕ ಕೆಂಪು ರಕ್ತ

2 comments: