Feb 19, 2013

ಸಾಗರ ಕಿನಾರೆಯಲ್ಲೊಬ್ಬ ಏಕಾಂಗಿ


ಮರುಳು ಮಾಡಿದೆ ಮಾತು
ಮೌನದ ಸವಿಯನ್ನು ಮರೆತು
ಮಾತಿನಲ್ಲಿನ ಮುದದ ಬಲೆ
ಮರುಳುಗೊಂಡಿದೆ ಕೇಳುತಾ ಮೌನದ ಲೀಲೆ

ಮಾತನಾಡುವ ಹಕ್ಕಿ ಮೌನವ ತಾಳುತ
ಮನವನು ಕಲಕಿದೆ ಮೌನದ ಹಾಡನ್ನು ಗುನುಗುತ
ನಾನೂ ಗುನುಗುವೆ ಆ ಮೌನವ ಮರೆಯಲು
ಗುನುಗಿದ ದನಿ ತರುವುದು ಮರೆಯಲಾಗದ ಅಳಲು

ಸಾಗರದ ದಂಡೆಯಲಿ ಏಕಾಂಗಿಯಾಗಿ
ಮರಳಲಿ ಕಾಲೆಳೆವೆ ತಂಗಾಳಿಗಾಗಿ
ಗಾಳಿ ತರುವುದು ತಂಪು ತನುವಿಗೆ
ಆದರೆ ಅಲೆಗಳು ಏಳುವುದು ಮನದಲಿ ನಂದಿಸುತ ಸಮತೆಯ ದೀವಿಗೆ

ಮೈ ಬಿಚ್ಚಿ ಮಲಗಲು ಕರೆದಿದೆ ಭೂಮಿಯ ಒಡಲು
ಮನಬಿಚ್ಚಿ ಹರಟಲು ಯಾರೂ ಇಲ್ಲವೆಂಬ ದಿಗಿಲು
ದೂರದಲ್ಲಿ ಕಾಣುತಿದೆ ಸೂರ್ಯನ ಪಕ್ಕದಲಿ ಒಂದು ಹಡಗು
ಕೈಯೊಡ್ಡಿ ಬೇಡುವೆ ಹಡಗು ತರದಿರಲಿ ನನ್ನಲ್ಲಿ ಮಿಂಚು- ಗುಡುಗು

No comments:

Post a Comment