Jan 18, 2013

ಮನದೊಳಗಿನ ಮಾಯೆ

ಮಾಯೆ ಆವರಿಸಿದೆ ಮನವ
ಮರುಳು ಮಾಡಿದೆ ಮನುಷ್ಯನೊಳಗಿರುವ ಮಗುವ

ಮಾತುಗಳು ಅಪ್ಪಳಿಸಿವೆ ಅಲೆಗಳಂತೆ
ಮೌನ ಆವರಿಸಿದೆ ಮಗುವ ಇನ್ನಿಲ್ಲದಂತೆ

ಬಿಡುವೆನೆಂದರೂ ಬಿಡದು ಈ ಮಾಯೆ
ಜಗದ ನಿಯಮ ಮೀರಿದರೂ ಸರಿಯೆ

ನಿತ್ಯ ಸತ್ತು ಹೊಸ ಹುಟ್ಟು ಪಡೆವ
ಸೂರ್ಯನ ನಿತ್ಯ ಸತ್ಯ ಕುಕ್ಕುತ್ತಿದೆ ಗವಿಯೊಳಗಿನ ಮುಗ್ದ ಮಗುವ

ಅತ್ತರೂ ಕೇಳುವವರಿಲ್ಲ ಕಾರಣ ಆಲಿಸುವ ಕಿವಿಗಳು ಮುಚ್ಚಿ ಹೋಗಿದೆ ಮಣ್ಣಲ್ಲಿ
ಅಳಲು ಮಗುವೆ ಇಲ್ಲ ಬೆಳೆದು ದೊಡ್ಡದಾಗಿದೆ ಆ ಮಗು ಮನದಲ್ಲಿ


No comments:

Post a Comment