Dec 30, 2012

ಪುಟ್ಟಹಕ್ಕಿ-ಕೆಂಪುಚುಕ್ಕಿ


ಹಗಲುಗನಸುಗಳಿಂದ ಭಾರವಾಗಿದೆ ಎದೆ
ರಾತ್ರಿ ಎಲ್ಲಾ ಅದೇ ಹಳೆ ಕನಸುಗಳು ಕಾಡುವವು ಪದೆ ಪದೆ
ಎದೆ ಮಿಡಿಯುತಿರುವುದು ಮಾತನ್ನರಸಿ
ಮನ ಮಾಸುತ್ತಿರುವುದು ಮೌನದ ಬೇರನ್ನು ಅರಸಿ

ಓ ಜಗದ ಬೆಳಕೆ
ನನ್ನದೊಂದು ಹರಕೆ
ಹೆಪ್ಪುಕಟ್ಟಿದ ನೆತ್ತರ ಬಡಿದೆಬ್ಬಿಸು
ಕತ್ತಲ ಕೂಪಕ್ಕೆ ಜಾರಿದಂತಹ ಮನವನ್ನು ಆವರಿಸು

ಓ ಸೂರ್ಯನೆ, ಕೋಟಿ ಹನಿ ರಕ್ತದ ಮೂಲದಲ್ಲಿಯ ಬಿಂದು
ಎಂದಿನಂತೆಯೆ ನನ್ನ ಕರೆದೊಯ್ಯೊ ಬಂದು
ಅವಕಾಶದೊಳಗಿನ ಪುಟ್ಟಹಕ್ಕಿ
ಹಾರುತಿದೆ ನಿನ್ನೆಡೆಗೆ ತವಕ ಉಕ್ಕಿ

ರಕ್ತಕಾಂತಿಯ ಚುಕ್ಕಿ ನೀ ಕೆಂಪುಚುಕ್ಕಿ
ಹಾರುತಿಹ ಹಕ್ಕಿ ನಾ ಪುಟ್ಟಹಕ್ಕಿ

No comments:

Post a Comment