Dec 15, 2012

ಆಶಯ


ಕಪ್ಪು ಕವಿದ ಇರುಳು ಇಂಗುವ ಮೊದಲು
ಮೂಡಲಿ ನಗುವೆಂಬ ನಕ್ಷತ್ರ


ಅಸಂಖ್ಯ ಆಕಾಶಕಾಯಗಳು ಕಣ್ಣಿಗೆ ಕಾಣದಂತಾಗುವ ಮೊದಲು
ಮೂಡಲಿ ಸುಖವೆಂಬ ಸೂರ್ಯ

ಸೂಸುವ ಸಮೀರನ ಆರ್ಭಟ ಆರಂಭವಾಗುವ ಮೊದಲು
ಮೂಡಲಿ ನೆಮ್ಮದಿ ತುಂಬಿದ ನೇಸರ

ಮಾತುಗಳ ಮರ್ಮ ಮರೆಯಾಗುವ ಮುನ್ನ
ಮೋಡಗಳ ಚದರಿಸುವ ಚಂಚಲ ಚೇತನ 
ಚಿರನಿದ್ರೆಯ ಚಿತೆಯೇರಲಿ

No comments:

Post a Comment