Nov 21, 2012

ಚದರಿರುವ ಚುಕ್ಕಿ


ನಕ್ಷತ್ರ ಎಣಿಸೋಣ ಬನ್ನಿ

ನಾನು ನೀವು ಬಾನಿನ ಅಂಚಿಂದ ಮೊದಲ್ಗೊಂಡು

ಎಣಿಸುತ್ತಾ ಎಣಿಸುತ್ತಾ ನಮ್ಮದಾಗಿಸಿಕೊಂಡು

ಪದೆ ಪದೆ ಎಣಿಸೋಣ ಚಂದ್ರಮನಿಗೊಂದನ್ನು ಕೊಟ್ಟು
ಪುನಃ ಪುನಃ ನೋಡೋಣ ಮಿಟುಕುವ ಕಣ್ಣನು ಬಿಟ್ಟು

ಎಡೆಬಿಡದೆ ಎಣಿಸಿ ಅವರೊಳಗೊಂದೆನಿಸಿ
ಸದಾ ಮಿನುಗುವ ಚುಕ್ಕಿಗಳಾಗೋಣ

ಅನಂತ ಅವಕಾಶದೊಳಗಣ ಕೆಂಪುಚುಕ್ಕಿ....

No comments:

Post a Comment