Sep 30, 2012

ಜೀವನ ಜುಗಾರಿಯಾಟ

ಜೀವನದ ಜುಗಾರಿ ಆಟದೊಳು
ನಾನು ನೀನು ಎಂಬೆರಡು ದಾಳಗಳು
ಒಂದನ್ನು ಕೊಟ್ಟು ಮತ್ತೊಂದ ಪಡೆವ ಹುಬಿಡದ ಗಿಡದ ಕಾಯಿಗಳು

ಅಖಂಡ ವಿಶ್ವದಲಿ ದ್ವಂಧ್ವಾರ್ಥ ಪಡೆವ ನಾವುಗಳು
ನಿನ್ನೊಳಗೆ ನನ್ನ ನ್ನನ್ನೊಳಗೆ ನಿನ್ನ ಅರಿಯದೇ ಅರಸುವ ಕಣ್ಣುಗಳು

ಎರಡು ವೈರುಧ್ಯಗಳು ಸಂಧಿಸದ ರೇಖೆಗಳೆಂದರಿಯದ ನಾವು
ಪಾಪಾಸು ಕಳ್ಳಿಯಲಿ ನಸು ನಗುವ ಹೂವು
ಕ್ಷಣಕೊಮ್ಮೆ ಸಂಧಿಸಲು ಬಯಸುತಿಹೆವು

ಆಟದ ಮರ್ಮವ ತಿಳಿಯದೆ ಮರೆಯಾದೆವು ನಾವು
ನಮ್ಮ ನೋಡಿ ನಗುತಿಹವು ಗೋರಿ ಮೇಲಿನ ಹೂವು

No comments:

Post a Comment