Sep 17, 2012

ಉಸಿರಾಡದ ಮುರಲಿ
ಜಗತ್ತಿಗೆ ರಾಧೆ ಒಬ್ಬನ ಹೆಂಡತಿ
ಆದರೆ ಕೃಷ್ಣನಿಗೆ ಅವಳೇ ಪರಮಾಪ್ತ ಗೆಳತಿ

ರಾಧೆಗೆ ಒಬ್ಬ ಮನೆಯೊಡೆಯ
ಜಗದೊಡೆಯ ಕೃಷ್ಣ ಆಕೆಯ ಮನದೊಡೆಯ
ನೋವಿಗೆ ಆತನೇ ಗೆಳೆಯ ನಲಿವಿಗೆ ಅವನೇ ಇನಿಯ
ಬಿಡಿಸಲಾಗದ ನಂಟು ಆದರೂ ಬಿಡಿಸಿಕೊಂಡಿತು ಒಡ್ಡಿ ಕಾರಣಗಳ ನಿಘಂಟು

ಲತೆಯಂತೆ ಸುರುಳಿ ಸುತ್ತಿದ ಪ್ರೀತಿಯ ಸಂಬಂಧ ಬಿಡಿಸಲು ಸುಲಭ
ಆದರೆ ಹೂ ಬಳ್ಳಿ ಉಳಿಯುವುದು ದುರ್ಲಭ
ಲೋಕದ ಕಣ್ಣಿಗೆ ರಾಧಾ ಕೃಷ್ಣರು ಬೇಧಿಸಲಾಗದ ಜಿಡುಕಾದ ಭಾವ
ಅವರು ಜಗತ್ತಿನ ಪ್ರತಿಯೊಬ್ಬನೂ ಹಾಕುವ ಕನ್ನಡಕಗಳಲ್ಲಿ ಕಾಣಿಸುವ
ಯುಗಳ ಪ್ರೇಮಿಗಳೆ? ಅಕ್ಕ ತಮ್ಮರೆ?
ಅಥವಾ ಕೇವಲ ಗೆಳೆಯ ಗೆಳತಿಯರೆ?

ಆದರವರು ಈ ಲೌಕಿಕ ಗೊಂದಲಗಳನ್ನು ಮೀರಿದ
ಮನವ ಬೆಸೆವ ನಿಷ್ಕಲ್ಮಷ ಭಾವನೆಯನ್ನು ಹೆಸರಿಸಲಾಗದ
ದುರಂತ ಪಾತ್ರಗಳು
ಸಂಬಂಧದ ನೆಲೆ ಕಳೆದುಕೊಂಡ ಗೋಡೆ ಚಿತ್ರಗಳು!

No comments:

Post a Comment