Aug 26, 2012

ಬರಬೇಡ

ಬಾರಪ್ಪೋ ಮಳೆರಾಯ ನಮ್ಮ ಬಾಳೆಯ ತೋಟಕೆ ನೀರಿಲ್ಲ....
ಯಾತಕ್ಕೆ ಮಳೆ ಹೋದವೋ ಶಿವ ಶಿವ ಲೋಕ ತಲ್ಲಣಿಸುತಾವೋ....
ಬಾ ಮಳೆಯೆ ಬಾ.... ಎಂದೆಲ್ಲಾ ಹಾಡಿದರು ಅಂದು.
ಕಾರಣ.... ಕಾಣದ ವರ್ಷಧಾರೆ.


ಇಂದೂ ಮಳೆ ಇಲ್ಲವಲ್ಲ! ಹಾಡೋಣವೆ ಈಗ ಮೇಘ ಮಲ್ಹಾರ್ ರಾಗ?
ಮಾಡೋಣವೆ ಪರ್ಜನ್ಯ ಜಪ-ಯಾಗ?
ಬೇಡಪ್ಪಾ ಬೇಡ! ನೀರಿಗೆ ಕೊರತೆ ಆದರೂ ಅಡ್ಡಿಲ್ಲ... ಆಮದು ಮಾಡಿಕೊಳ್ಳೋಣ ಎಂದೆನುವರೀಗ!
ಯಾಕಪ್ಪಾ ಇಂತಹ ಮಾತು ಅಂತೀರಾ?ಹಾಗಾದರೆ ಕೇಳಿ ಈಗ

ಮಳೆ ಬಂದ್ರೆ........
ನೀರು ನದಿ ಕೆರೆಗಳನ್ನ ಸೇರೊದಕ್ಕೆ ಸರಿಯಾದ ಒಳಚರಂಡಿ ವ್ಯವಸ್ತೆ ಬೇಕು,
ಅಷ್ಟೆ ಸಾಕೆ? ನೀರನ್ನ ಸೇರಿಸಿಕೊಳ್ಳೊದಕ್ಕೆ ನದಿ ಕೆರೆಗಳೂ ಬೆಕಲ್ಲಾ?
ಅಲ್ಲೊ ಇಲ್ಲೊ ಒಂದೆರಡು ಇದ್ದರೂ ನೀರು ತುಂಬಿಸಿಕೊಳ್ಳೊ ಸಾಮರ್ಥ್ಯವೇ ಇಲ್ಲವಲ್ಲ!

ಅಧಿಕಾರಿಗಳು ಹೇಳ್ತಾರೆ, "ಇಂತಿಷ್ಟು ಕ್ಯೂಸೆಟ್ ಸಾಮರ್ಥ್ಯ ಇದೆ"
ಆದರೆ ಸಾಮರ್ಥ್ಯ ಇದ್ದರೂ ಅದರಲ್ಲಿ ನೀರಿನ ಬದಲು ಹೂಳೆ ತುಂಬಿದೆ...!
ನದಿ ಕೆರೆ ಜಲಾಶಯಗಳ ಹೂಳೆತ್ತದೆ, ಸರಿಯಾದ ಒಳಚರಂಡಿ ವ್ಯವಸ್ತೆ ಮಾಡದೆ
ಮಳೆಯನ್ನ ಶಪಿಸಿದರೆ ಏನು ಪ್ರಯೋಜನ!

ತುಸುಮಳೆಯೂ ಪ್ರವಾಹವಾಗಿ, ಆಗುವುದು ಅಸ್ತವ್ಯಸ್ತ ಜನಜೀವನ...
ಅಷ್ಟಕ್ಕೂ.... ಇದಕ್ಕೆಲ್ಲ ಯಾರು ಕಾರಣ?
ಪ್ರಕೃತಿಯೇ? ನಾವೇ?

No comments:

Post a Comment