Aug 4, 2012

ಕರ್ನಾಟಕದ ಜನಪದ, ವೃತ್ತಿ ಹಾಗೂ ಹವ್ಯಾಸಿ ರಂಗಭೂಮಿಯಲ್ಲಿ ಮಹಿಳೆಯರು

              'ರಂಗಭೂಮಿ ಮತ್ತು ಮಹಿಳೆ' ಎನ್ನುವ ಬರವಣಿಗೆ ಮೊದಲು ನನ್ನ ಬ್ಲಾಗ್ ಅಲ್ಲಿ ಪ್ರಕಟಿಸಿದ್ದೆ. ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಮತ್ತು ಹಲವಾರು ಗೆಳೆಯರ ಮಾರ್ಗದರ್ಶನದಿಂದಾಗಿ ಲೆಖನ ಬರೆಯುತ್ತಿದ್ದೇನೆ. ಮೊದಲೇ ಹೇಳಿದಂತೆ ವಿಷಯ ಬಹಳ ಆಳವಾದದ್ದು ಮತ್ತು ಧೀರ್ಘವೂ ಕೂಡ. ಮೊದಲ ಲೇಖನ ಸವಿಸ್ತಾರವಲ್ಲದ ಹಾಗೂ ಕೇವಲ ಹೊರಗಿನ ಸ್ವರೂಪಸೂಚಿತ ಲೇಖನ ಎನ್ನುವುದು ಸ್ಪಷ್ಟ. ಹಾಗಾಗಿ ಅದರ ಮುಂದುವರಿದ ಭಾಗವೆನ್ನುವಂತೆ ಲೇಖನವನ್ನು ಬರೆಯುತ್ತಿದ್ದೇನೆ.
              ಮೂಲದಲ್ಲಿ 'ಜನಪದ' ಮತ್ತು 'ಜಾನಪದ' ಭಿನ್ನಾರ್ಥ ಹೊಂದಿದ್ದರೂ ಸಾಮಾನ್ಯ ಬಳಕೆಯಲ್ಲಿ ಅಂತಹ ವ್ಯತ್ಯಾಸವಿಲ್ಲವಾದ್ದರಿಂದ ನಾನು ಇವೆರಡನ್ನೂ ಕ್ರೋಢೀಕರಿಸಿದ ಅರ್ಥದಲ್ಲಿ ಜನಪದ ಯಾ ಜಾನಪದ ಎನ್ನುವ ಪದವನ್ನ ಬಳಸುತ್ತೇನೆ.
ಜನಪದ ರಂಗಭೂಮಿ ಅಥವಾ ಜಾನಪದ ಕಲೆ ಜನಸಾಮಾನ್ಯರ ಬದುಕಿನಂತೆ ಸದಾ ಚಲನಶೀಲವಾದದ್ದು, ನಾಗರೀಕ ಸಮಾಜ ನಿರ್ಮಾಣಕ್ಕೂ ಮೊದಲೇ ಮನುಷ್ಯನ ಅವಿಭಾಜ್ಯ ಅಂಗವಾಗಿ, ಮನುಷ್ಯ- ಸಮಾಜ ಬದಲಾದಂತೆಲ್ಲ ಅವನೊಂದಿಗೆ ಬದಲಾಗುತ್ತಾ ಬೆಳೆಯುತ್ತಾ ಬಂದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ನು ಕರ್ನಾಟಕದ ಜಾನಪದ ಕಲೆಗಳನ್ನ ಗಮಿನಿಸಿದರೆ ಮುಖ್ಯವಾಗಿ ಎರಡು ರೀತಿಯ ಪ್ರಕಾರಗಳನ್ನ ಗುರುತಿಸಬಹುದು ಅಥವಾ ವಿಂಗಡಿಸಬಹುದು. ಅವುಗಳೆಂದರೆ, ಭಕ್ತಿ/ಆರಾಧನಾ ಕಲಾಪ್ರಕಾರಗಳು ಮತ್ತು ಲೌಕಿಕ/ಲೋಕಧರ್ಮಿ ಕಲಾಪ್ರಕಾರಗಳು. ಆರಾಧನಾ ಕಲಾಪ್ರಕಾರಗಳು ಪುರುಷಶಾಹಿ ವರ್ಣವ್ಯವಸ್ಥೆಯಲ್ಲಿ ಹುಟ್ಟಿಕೊಂಡಿರುವುದರಿಂದ ಅವುಗಳಲ್ಲಿ ಪುರುಷರೇ ಪ್ರಧಾನ. ಉದಾಹರಣೆಗೆ ಹಳೆ ಮೈಸೂರು ಪ್ರಾಂತ್ಯದ ಡೊಳ್ಳು ಕುಣಿತ, ಬೀಸು ಕಂಸಾಳೆ; ಉತ್ತರ ಕರ್ನಾಟಕದ ದೊಡ್ಡಾಟ, ಜಗ್ಗಳಿಗೆ ಮೇಳ, ಕರಡಿ ಮಜಲು, ದಾಸರಾಟ, ವೀರಗಾಸೆ, ಪೂಜಾ ಕುಣಿತ, ನಂದಿ ಧ್ವಜ, ಗೊರವರ ಕುಣಿತ; ಮಲೆನಾಡು- ಕರಾವಳಿಯ ಯಕ್ಷಗಾನ, ಡಕ್ಕೆಬಲಿ, ನಾಗಮಂಡಲ, ಪಾಣರಾಟ/ಭೂತಾರಾಧನೆ, ಕಂಗೀಲು, ಆಟಿ ಕಳಂಜ, ಹುಲಿವೇಷ ಮುಂತಾದ ಹಲವಾರು ಕಲಾಪ್ರಕಾರಗಳಲ್ಲಿ ಎಲ್ಲಾ ಪಾತ್ರಧಾರಿಗಳು ಪುರುಷರೇ. ಅದಕ್ಕೆ ಇನ್ನೂ ಒಂದು ಕಾರಣವಿರಬಹುದು. ಅದೇನೇಂದರೆ, ಎಲ್ಲಾ ಕಲಾಪ್ರಕಾರಗಳು ಪ್ರಧಾನವಾಗಿ ಆರಾಧಿಸುವುದು ಪುರುಷ ದೇವರುಗಳನ್ನು. ಇದೇರೀತಿ ಶಕ್ತಿ ಅಥವಾ ದೇವಿಯನ್ನು ಆರಾಧಿಸುವ ಕಲೆಗಳಾದ ಕರಗ, ಮಾರೀ ಕುಣಿತ, ಸೋಮನ ಕುಣಿತ, ಮುಂತಾದ ಕಲಾ ಪ್ರಕಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುತ್ತಾರೆ.

              ಇನ್ನೂ ಕೆಲವು ಕಲಾಪ್ರಕಾರಗಳಲ್ಲಿ ಸ್ತ್ರೀ- ಪುರುಷರು ಜೊತೆಯಾಗಿ ಪಾತ್ರ ನಿರ್ವಹಿಸುತ್ತಾರೆ. ಉದಾಹರಣೆಗೆ ಕೋಲಾಟ, ಹೋಳಿ ಕುಣಿತ, ಕುಡುಬಿಯರ ಕುಣಿತ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ ಇತ್ಯಾದಿ. ಇನ್ನು ಸುಗ್ಗಿ ಕುಣಿತದಂತಹ ಕೇವಲ ಮಹಿಳೆಯರು ಮಾತ್ರ ಮಾಡುವ ಕಲಾಪ್ರಕಾರಗಳೂ ಇವೆ.  ಇಂತಹ ಕಲಾಪ್ರಕಾರಗಳು ಲೌಕಿಕ ಅಥವಾ ಲೋಕಧರ್ಮಿ ಕಲೆಗಳು.(ಸಣ್ಣಾಟ ಮತ್ತು ಶ್ರೀಕೃಷ್ಣ ಪಾರಿಜಾತಗಳು ಆರಾಧನಾ ಕಲೆಯಾಗಿದ್ದರೂ ಬರಬರುತ್ತಾ ಸಣ್ಣಾಟವು ಸಾಮಾಜಿಕ ವಿಷಯಗಳನ್ನ ವಸ್ತುವನ್ನಾಗಿಸಿಕೊಂಡಿತು, ಶ್ರೀಕೃಷ್ಣಪಾರಿಜಾತದಲ್ಲಿ ಸ್ತ್ರೀ ಪಾತ್ರಗಳನ್ನ ಮಹಿಳೆಯರೇ ಮಾಡತೊಡಗಿದರು.)  
              ಇಂತಹ ಎಷ್ಟೋ ಜನಪದ ಕಲೆಗಳು ಕಣ್ಮರೆಯಾಗಿವೆ. ಇನ್ನೂ ಕೆಲವು ಅಳಿವಿನ ಅಂಚಿನಲ್ಲಿವೆ.   ಎಲ್ಲಾ ಜನಪದ ಕಲಾಪ್ರಕಾರಗಳು ಆಯಾ ಸಂದರ್ಭ ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದಿವೆಪ್ರಸಕ್ತ ಕಾಲಮಾನದಲ್ಲಿ ಪುರುಷರಿಗೆಂದೇ ಸೀಮಿತವಾಗಿದ್ದ ಕಲಾಪ್ರಕಾರಗಳನ್ನು ಮಹಿಳೆಯರೂ ಮಾಡುತ್ತಿದ್ದಾರೆ. ಮಹಿಳಾ ಯಕ್ಷಗಾನ ತರಬೇತಿ ಕೇಂದ್ರಗಳು ಪ್ರಾರಂಭಗೊಂಡಿವೆ. ಮಹಿಳಾ ಯಕ್ಷಗಾನ, ತಾಳಮದ್ದಲೆ ತಂಡಗಳು, ಮಹಿಳಾ ಡೊಳ್ಳುಕುಣಿತ ತಂಡಗಳು, ಮಹಿಳಾ ಕಂಸಾಳೆ, ವೀರಗಾಸೆ, ಪೂಜಾಕುಣಿತ, ಕಂಗೀಲು ಮುಂತಾದ ಅನೇಕ ತಂಡಗಳು ಇಂದು ನಾಡಿನಾದ್ಯಂತ ಸಂಚರಿಸಿ ಅನೇಕ ಪ್ರದರ್ಶನಗಳನ್ನ ನೀಡುತ್ತಿವೆ. ನಶಿಸುತ್ತಿದೆ ಎನ್ನಲಾಗುತ್ತಿರುವ ಜನಪದ ಕಲೆಗಳಿಗೆ ಪುನರ್ಜೀವನ ಕಲ್ಪಿಸುವ ಕಾರ್ಯವನ್ನ ಇಂತಹ ತಂಡಗಳು ಮಾಡುತ್ತಿವೆ. ಒಂದು ಕಾಲದಲ್ಲಿ ಮಹಿಳೆಯರನ್ನ ಹೊರಗಿರಿಸಿದ್ದ ಅಥವಾ ನಿಷೇಧಿಸಿದ್ದ ಕಲೆಗಳನ್ನ ಇಂದು ಮಹಿಳೆಯರೇ ಗಟ್ಟಿಗೊಳಿಸುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆಯೇ ಸರಿ.

              ಇನ್ನು ವೃತ್ತಿರಂಗಭೂಮಿಯ ಬಗ್ಗೆ ಹೇಳೋದಾದ್ರೆ, ಕರ್ನಾಟಕ ರಂಗಭೂಮಿ ಇತಿಹಾಸದಲ್ಲಿ ವೃತ್ತಿರಂಗಭೂಮಿ ತನ್ನದೇ ಆದ ಕೊಡುಗೆ ನೀಡಿದೆ. ವೃತ್ತಿರಂಗಭೂಮಿಯ ಆರಂಭದ ಕೆಲ ವರ್ಷಗಳನ್ನು ಹೊರತುಪಡಿಸಿದರೆ, ಇಲ್ಲಿಯೂ ಸ್ತ್ರೀಯರ ಸಾಧನೆ ಎದ್ದು ಕಾಣುತ್ತದೆ. ಕರ್ನಾಟಕ ವೃತ್ತಿರಂಗಭೂಮಿಯ ಇತಿಹಾಸದ ಪುಟಗಳನ್ನ ನೋಡಹೊರಟರೆ ನಮಗೆ ಬಹಳಷ್ಟು ಪುರಾವೆಗಳು ಸಿಗುತ್ತವೆ. ಇತಿಹಾಸದ ಪ್ರಕಾರ ಗುಳೇದಗುಡ್ಡದಯಲ್ಲೂಬಾಯಿವೃತ್ತಿಕಂಪೆನಿಗಳಮೊದಲ ಮಹಿಳಾ ಕಲಾವಿದೆ’. ಆದರೆ ಇದಕ್ಕಿಂತ ಮೊದಲೇ ಪಾಪಸಾನಿಯವರಸ್ತ್ರೀ ನಾಟಕ ಮಂಡಳಿಅಸ್ತಿತ್ವದಲ್ಲಿದ್ದು, “ಹರಿಶ್ಚಂದ್ರ”, “ಪ್ರಭಾವತಿ ದರ್ಬಾರುಮುಂತಾದ ನಾಟಕಗಳನ್ನಾಡುತ್ತಿದ್ದರೆಂದೂ ಕೆಲ ಇತಿಹಾಸಕಾರರು ಹೇಳಿದ್ದಾರೆ. ತದನಂತರದಲ್ಲಿ ಕಾಣಿಸಿಕೊಂಡ ಬಚ್ಚಸಾನಿಯವರಮಹಿಳಾ ನಾಟಕ ಮಂಡಳಿ’, ಗಂಗೂಬಾಯಿಯವರಶ್ರೀಕೃಷ್ಣ ನಾಟಕ ಮಂಡಳಿ’, ಅಂಬುಜಮ್ಮ ಅವರಶ್ರೀ ಸ್ತ್ರೀ ನಾಟಕ ಮಂಡಳಿ’, ಸೋನುಬಾಯಿ ದೊಡ್ಡಮನಿಯವರನೂತನ ಸಂಗೀತ ನಾಟಕ ಮಂಡಳಿ’, ರೆಹಿಮಾನವ್ವ ಅವರಶ್ರೀ ಲಲಿತಕಲಾ ನಾಟ್ಯ ಸಂಘ’, ಮಳವಳ್ಳಿ ಸುಂದರಮ್ಮನವರ ನಾಟಕ ತಂಡ, ಬೆಂಗಳೂರಿನಸರಸ್ವತಿ ನಾಟಕ ಮಂಡಳಿ’, ‘ಗಾಯತ್ರಿ ಸ್ತ್ರೀ ನಾಟಕ ಮಂಡಳಿ’, ‘ಅಕ್ಕಮಹಾದೇವಿ ಕೃಪಾಪೂಷಿತ ನಾಟಕ ಸಭಾಹೀಗೆ ಹಲವಾರು ಮಹಿಳಾ ನಾಟಕ ಕಂಪೆನಿಗಳು ಇತರ ಕಂಪೆನಿಗಳಿಗೂ ಮಿಗಿಲಾದ ಜನಮನ್ನಣೆಗಳಿಸಿತ್ತು ಮತ್ತು ಕರ್ನಾಟಕ ಮಾತ್ರವಲ್ಲದೆ ಮರಾಠಿ ನೆಲದಲ್ಲಿಯೂ ಕನ್ನಡ ನಾಟಕ ಪ್ರದರ್ಶನ ನೀಡಿತ್ತು ಎನ್ನುವುದರ ಬಗ್ಗೆ ದಾಖಲೆಗಳಿವೆ.
ಇವು ಕೆಲವು ಕಂಪೆನಿಗಳಾದರೆ ಇನ್ನು ತಮ್ಮ ಅಭಿನಯ, ಮಾಲಿಕತ್ವ ಮತ್ತು ಇತರೇ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿದವರಲ್ಲಿ ಸುಂದರಮ್ಮ, ಸ್ವರ್ಣಮ್ಮ, ಮೋಹನ್ ಕುಮಾರಿ, ಜುಬೇದಾ ಬಾಯಿ ಸವಣೂರ, ಲಲಿತಮ್ಮ, ಲಕ್ಷ್ಮೀಬಾಯಿ, ಬಿ. ಜಯಮ್ಮ, ಆದವಾನಿ ಲಕ್ಷ್ಮೀದೇವಿ, ನಾಗರತ್ನಮ್ಮ, ಏಣಗಿ ಲಕ್ಷ್ಮೀಬಾಯಿ, ಮರಿಯಮ್ಮ, ಸೋಹನ್ ಕುಮಾರಿ, ಚಿಂದೊಡಿ ಲೀಲಾ ಮುಂತಾದವರು ಪ್ರಮುಖರು.
              ಮೇಲಿನದು ವೃತ್ತಿರಂಗಭೂಮಿಯಾದರೆ ಇನ್ನು ಹವ್ಯಾಸಿ ರಂಗಭೂಮಿಯಲ್ಲಿ ಪ್ರೇಮಾ ಕಾರಂತ್, ಬಿ. ಜಯಶ್ರೀ, ಆರ್. ಟಿ. ರಮಾ, ಉಮಾಶ್ರೀ, ಅರುಂಡತಿ ನಾಗ್, ಮಾಲತಿ ಕೆ ಹಾಗೂ ರಾಷ್ಟ್ರೀಯ ನಾಟಕಶಾಲೆ, ನಿನಾಸಂ ಮುಂತಾದ ರಂಗ ಶಿಕ್ಷಣ ಕೇಂದ್ರದಿಂದ ಹೊರಬಂದ ಅದೆಷ್ಟೋ ನಟಿಯರು, ತಂತ್ರಜ್ಞರು ನಾಡಿನ ಉದ್ದಗಲ ರಂಗಭೂಮಿಯ ಎಲ್ಲಾ ವಿಭಾಗಗಳಲ್ಲಿ ಯಾವುದೇ ತಾರತಮ್ಯವಿಲ್ಲದೆ ಕೆಲಸಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ ಮಾತ್ರವಲ್ಲ, ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದ ರಂಗಚಳವಳಿಯಲ್ಲಿ ಮಹಿಳೆಯರೂ ಪ್ರಮುಖ ಪಾತ್ರವಹಿಸಿದ್ದರು ಎನ್ನುವುದನ್ನ ಮರೆಯುವಂತಿಲ್ಲ. ಇದು ರಂಗಭೂಮಿಯ ಹೆಗ್ಗಳಿಕೆ ಮತ್ತು ಸಾಧ್ಯತೆ
              ಹಿಂದಿನ ಲೇಖನದಂತೆ ಈ ಬರವಣಿಗೆಯೂ ಅಪೂರ್ಣ. ಇಲ್ಲಿ ಹೇಳಿರುವುದೇ ಕರ್ನಾಟಕದ ನಿಜವಾದ ಪರೀಸ್ಥಿತಿ ಎಂದು ಹೇಳಲಾರೆ. ಬೇರೆ ಬೇರೆ ಭಾಗದಲ್ಲಿ ಬೇರೆ ಬೇರೆ ರೀತಿಯ ಸಮಸ್ಯೆಗಳಿವೆ. ಮೇಲ್ನೋಟಕ್ಕೆ ಎಲ್ಲವು ಸುಂದರವಾಗಿ ಕಂಡರೂ ರಂಗಭೂಮಿ  ಹೂವಿನ ಹಾಸಿಗೆಯಲ್ಲ, ಕಲ್ಲುಮುಳ್ಳುಗಳಿರವ ದಾರಿಯ ತುದಿಯಲ್ಲಿರುವ ಗುಲಾಬಿಗಿಡ.
              ಇದರಲ್ಲಿಯೂ ಕೂಡ ಬಹಳ ವಿಷಗಳನ್ನ, ಜನಪದ ಕಲೆಗಳನ್ನ, ವೃತ್ತಿನಾಟಕ ಕಂಪೆನಿಗಳ, ಹವ್ಯಾಸಿ- ವೃತ್ತಿ ರಂಗಕಲಾವಿದರ ಹೆಸರುಗಳನ್ನ ಬಿಟ್ಟಿರಬಹುದು. ಅದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಈ ಬರವಣಿಗೆ ನನ್ನ ಹಿಂದಿನ ಲೇಖನದ ಒಂದು ಮುಂದುವರಿದ ಭಾಗವಷ್ಟೆ. ಆದರೆ ಇಂತಹ ಪ್ರಯತ್ನಮಾಡಲು ನನ್ನನ್ನ ಪ್ರೇರೇಪಿಸಿ ಪ್ರೊತ್ಸಾಹಿಸಿದ ಎಲ್ಲಾ ಓದುಗರಿಗೆ ಮತ್ತು ನನ್ನನ್ನು ತಿದ್ದಿ ಧೈರ್ಯತುಂಬಿದ ಎಲ್ಲಾ ಗೆಳೆಯರಿಗೆ ನನ್ನ ಕೃತಜ್ಞತೆಗಳು.

2 comments:

  1. hmm hwdu mahileyarindagi yestoo jaanapada kalegalige maru janma bandide,, mareyagi hogidda yasto kalegalu matte belakige bandide,, namma aashe iste,, ide riti mahileyarige yalla kshtradallu protsaha sigali anta..:)

    ReplyDelete
    Replies
    1. Bere ithare kshethragaliginta rangabhoomi yalli vibhinna reethiya mattu hechhina prothsaha sigtha ide... kaalakramena ella kshethradalliyu hecchina prothsaha mattu bembala sigali ennuva aashaabhavaneyallirona....

      Delete