Jul 30, 2012

ರಂಗಭೂಮಿ ಮತ್ತು ಮಹಿಳೆ

             'ರಂಗಭೂಮಿ ಮತ್ತು ಮಹಿಳೆ' ಇದು ಬಹಳ ವಿಸ್ತಾರವಾದ ಮತ್ತು ಆಳವಾದ ವಿಷಯ. ಇವೆರಡರ ಬಗ್ಗೆ ಪ್ರಬುದ್ಧವಾಗಿ, ನಿಖರವಾಗಿ ಬರೆಯುವಷ್ಟು  ಪ್ರೌಢಿಮೆ ನನ್ನಲ್ಲಿಲ್ಲ. ಆದರೆ ರಂಗಭೂಮಿಯ ವಿದ್ಯಾರ್ಥಿಯಾಗಿ ಪ್ರಸಕ್ತ ಸಂದರ್ಭದಲ್ಲಿ ಈ ವಿಷಯದ ಮೇಲೆ ಬೆಳಕು ಚೆಲ್ಲುವುದು ಪ್ರಸ್ತುತ ಎಂದೆನಿಸುತ್ತದೆ. ಈ ವಿಷಯ ಅಗಾಧವಾದ ಆಯಾಮಗಳನ್ನ ಮತ್ತು ಅರ್ಥಗಳನ್ನ ಪಡೆದಿದ್ದರೂ, ನನ್ನ ಇತಿಮಿತಿಯಲ್ಲಿ ಬರೆಯುತ್ತಿದ್ದೇನೆ. ಇಲ್ಲಿ ರಂಗಭೂಮಿಯ ಉಗಮದಿಂದ ಪ್ರಾರಂಭಿಸುವ ಸಾಹಸ ಮಾಡೋದಿಲ್ಲ...
             ಮಹಿಳೆ ಮತ್ತು ರಂಗಭೂಮಿಯ ಸಂಬಂಧ ತೀರಾ ಹಳೆಯದಲ್ಲ. ಮಹಾನಾಟಕಕಾರ ಶೇಕ್ ಸ್ಪಿಯರ್ ನ ಕಾಲವಾದ 16ನೇ ಶತಮಾನದಲ್ಲಿ ಇಂಗ್ಲಾಂಡ್ ನಲ್ಲಿ ಕೆಲಕಾಲ ನಾಟಕವಾಡುವುದೇ ಅಪರಾಧವಾಗಿತ್ತು.
ಅಂತದ್ರಲ್ಲಿ ಒಬ್ಬ ಮಹಿಳೆ ರಂಗದಲ್ಲಿ ಕಾಣಿಸಿಕೊಳ್ಳುವುದೆಂದರೆ! ಮತ್ತು ಅಂದಿನ ಸಾಮಾಜಿಕ ಪರೀಸ್ಥಿತಿಯಲ್ಲಿ  ಮಹಿಳೆಯ ಸ್ಥಾನ ಯಾವ ಸ್ಥರದಲ್ಲಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ರಂಗಭೂಮಿ ಸಮಾಜಕ್ಕೆ ಹಿಡಿದ ಕನ್ನಡಿಯಾದ್ದರಿಂದ ಅದರಲ್ಲಿನ ವಾತಾವರಣ ಭಿನ್ನವಾಗಿರಲಿಲ್ಲ  ಎಂದೇನು ಹೇಳಬೇಕಾಗಿಲ್ಲ. ಹಾಗಾಗಿ ಅಂದಿನಿಂದ ಇಂದಿನವರೆಗೂ ಮಹಿಳೆಯನ್ನೇ ಕೇಂದ್ರೀಕರಿಸಿದ ಅಥವಾ ಮಹಿಳಾಪರ ಬಂದ ಪ್ರಬುದ್ಧ ರಂಗಕೃತಿಗಳು ಬೆರಳಣಿಕೆಯಷ್ಟೆ. ಮೊದಲನೆಯದಾಗಿ ಸಾಮಾಜಿಕ ನಿಬಂಧನೆಗಳಿಂದ ರಂಗಭೂಮಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಇಲ್ಲದ್ದರಿಂದ ಕೃತಿಕಾರರು ಅತೀ ಕಡಿಮೆ ಮಹಿಳಾಪಾತ್ರಗಳನ್ನ ಬಳಸಿಕೊಳ್ಳುತ್ತಿದ್ದರು, ಪುರುಷರೇ ಆ ಪಾತ್ರಗಳನ್ನ ನಿರ್ವಹಿಸುತ್ತಿದ್ದರು. ಮತ್ತು ಮಹಿಳೆ ಸಮಾಜದ ಕಟ್ಟಕಡೆಯ ವ್ಯಕ್ತಿ ಎನ್ನುವ ಮನೋಭಾವ ಬೇರೂರಿದ್ದರಿಂದ ರಂಗಕೃತಿಗಳ ವಸ್ತು ಬೇರೆಯೇ ಆಗಿತ್ತು. ತದನಂತರದಲ್ಲಿ ಮಹಿಳೆಯರು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳತೊಡಗಿದರೂ ಹೇಳುವಂತಹ ಮಹಿಳಾ ನಾಟಕಕಾರರು ಬರಲಿಲ್ಲ. ಬದಲಾಗಿ ನಾಟಕೇತರ ಸಾಹಿತ್ಯ ಕ್ಷೇತ್ರದಲ್ಲಿ  ಸಾಧನೆಗೈದವರೇ ಹೆಚ್ಚು. ರಂಗದಲ್ಲಿ ಅದೆಷ್ಟೂ ನಟಿಯರು ಮಿಂಚಿಮರೆಯಾಗಿದ್ದಾರೆ. ಆದರೆ ಅವರ ಸ್ಥಿತಿ ಪುರುಷ ನಟರಿಗಿಂತ ಬೇರೆಯದ್ದೇ ಆಗಿತ್ತು ಎನ್ನುವುದು ಸಾಮಾನ್ಯಜ್ಞಾನ. ಅವರಿಗೆ ಸಿಗುತ್ತಿದ್ದ ಗೌರವದಲ್ಲಾಗಲ್ಲಿ, ಪಾತ್ರದಲ್ಲಾಗಲಿ ಅಥವಾ ಭತ್ಯೆಯಲ್ಲಾಗಲ್ಲಿ ಎಳ್ಳಷ್ಟೂ ಸಮಾನತೆ ನುಸುಳಿರಲಿಲ್ಲ.
             ಆದರೆ ಈಗ ಪಾಶ್ಚಾತ್ಯ ರಂಗಭೂಮಿ ಊಹಿಸಲಸಾಧ್ಯವಾದ ಬದಲಾವಣೆ ಕಂಡುಕೊಂಡಿದೆ. ಅಲ್ಲಿ ರಂಗಭೂಮಿ ಕೇವಲ ಹವ್ಯಾಸ ಅಥವಾ ಮನರಂಜನಾ ಮಾಧ್ಯಮವಾಗಿ ಉಳಿದಿಲ್ಲ. ಬದಲಾಗಿ ಉದ್ಯಮವಾಗಿದೆ ಮತ್ತು ರಂಗಕರ್ಮಿಗಳಲ್ಲಿ ವೃತ್ತಿಪರತೆ, ಕಾರ್ಯತತ್ಪರತೆ ಅಗಾಧವಾಗಿ ಬೆಳೆದಿದೆ. ಹಾಗಾಗಿ ಮಹಿಳಾ ಮತ್ತು ಪುರುಷ ರಂಗಕರ್ಮಿಗಳ ನಡುವಿನ ಅಂತರ ಬಹಳಷ್ಟು ಕಡಿಮೆಯಾಗಿದೆ ಎಂದೇ ಹೇಳಬಹುದು. ಇಲ್ಲಿ ಉದ್ಯಮ ಎಂದರೆ ಆರ್ಥಿಕ ಉದಾರೀಕರಣ ಮತ್ತು ಜಾಗತೀಕರಣದ ಛಾಯೆಯಲ್ಲಿ ಕೃತಕವಾಗಿ ಉಸಿರಾಡುವ ಕೈಗೊಂಬೆಯಲ್ಲ ಎನ್ನುವುದನ್ನ ಸ್ಪಷ್ಟಪಡಿಸುತ್ತೇನೆ. ಯಾಕೆಂದರೆ, ಯಾವುದೇ ಕಲಾಮಾಧ್ಯಮ ಇಂತಹ ಉದ್ಯಮವಾದರೆ ಅದು ಕಲೆಯಾಗಿ ಉಳಿಯಲಾರದು.
             ಇನ್ನು ಭಾರತದ ಅಂದಿನ ಪರಿಸ್ಥಿತಿ ಪಾಶ್ಚಾತ್ಯರಿಗಿಂತ ಭಿನ್ನವಾಗಿರಲಿಲ್ಲ. ಪಾರ್ಸಿ ಶೈಲಿಯ ಕಂಪೆನಿ ನಾಟಕಗಳಲ್ಲಿ ಮಹಿಳೆಯರು ಅಭಿನಯಿಸತೊಡಗಿದರೂ, ಅವರು ಜನಾಕರ್ಷಕ ಹಾಗೂ ಮಾಲಿಕರ ಭೌತಿಕ ಸರಕುಗಳಾಗಿದ್ದರು. ಆದರೂ ಇದಕ್ಕೆ ಅಪವಾದವೆಂಬಂತೆ ಕೆಲವು ಉದಾಹರಣೆಗಳು ಸಿಗುಬಹುದು. ಆದರೆ ಯಾವಾಗ ನಾಟಕ ಕಂಪೆನಿಗಳು ಕೀಳು ಮನರಂಜನೆಯನ್ನ ಅಳವಡಿಸಿಕೊಂಡಿತೊ ಆಗ ಮಹಿಳೆ ಅಕ್ಷರಸಹ ಮಾನವ ಚೌಕಟ್ಟಿನಿಂದ ಹೊರಗುಳಿದಳು. ಆದರೆ 70ರ ದಶಕದ ರಂಗಚಳವಳಿ, ಮಹಿಳಾಪರ, ಜನಪರ ಚಳವಳಿಗಳಿಂದ ಸಾಮಾಜಿಕ ವಾತಾವರಣದಲ್ಲಿ ಬಹುದೊಡ್ಡ ಬದಲಾವಣೆ ಕಂಡಿತು. ರಂಗಭೂಮಿ ಇಡೀ ಸಮಾಜವನ್ನ ಚಿಕಿತ್ಸಕ ದೃಷ್ಟಿಯಲ್ಲಿ ನೋಡಬಯಸಿದ ಕಾಲವದು. ಆದರೆ, ಎಲ್ಲೋ ಒಂದುಕಡೆ ಸಾಮಾಜಿಕ ಸಮಾನತೆ, ವರ್ಗಸಮಾನತೆ ಸಾಧಿಸುವ ತವಕದಲ್ಲಿ ಲಿಂಗಸಮಾನತೆ ಮೂಲೆಗುಂಪಾಯಿತೆಂದೆನಿಸುತ್ತದೆ. ಬಹಳಷ್ಟು ಚೇತೋಹಾರಿ ರಂಗಕೃತಿಗಳು, ಪ್ರಯೋಗಗಳು ಬಂದರೂ ಮಹಿಳಾಪರ ಧ್ವನಿ ಎತ್ತಿದ ಉದಾಹರಣೆಗಳೆಲ್ಲಿವೆ? ಮಹಿಳೆಯರು ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಪುರುಷರ ಸರಿಸಮಾನಕ್ಕೆ ನಿಲ್ಲಲು ಸಾಧ್ಯವಾಗಿದೆಯೆ? ಭಾರತದ ಇಂದಿನ ಪರಿಸ್ಥಿತಿ ಪಾಶ್ಚಾತ್ಯರಿಗಿಂತ ಬೇರೆಯಾಗಿದ್ದರೂ ಅವರ 'ಪ್ರೊಫೆಶನಲಿಸಮ್' ಅನ್ನು ನಮ್ಮಲ್ಲಿ ತರಲು ಸಾಧ್ಯವಾಗದೇ ಇರುವುದು ಮತ್ತು ಇಲ್ಲಿನ ಒಟ್ಟು ಸಾಮಾಜಿಕ ಸ್ಥಿತಿಗತಿ ರಂಗಭೂಮಿಯ ಮೇಲೆ ತನ್ನ ಪ್ರಭಾವ ಬೀರುತ್ತಿರುವುದರಿಂದ ಇದು ಸಾಧ್ಯವಾಗಿಲ್ಲ ಎಂದೆನ್ನಬಹುದೇನೊ. ಇದಕ್ಕಿಂತ ಮುಖ್ಯವಾಗಿ ಭಾರತೀಯ ರಂಗಭೂಮಿ ಎಷ್ಟರ ಮಟ್ಟಿಗೆ ಆಂತರಿಕ ಮತ್ತು ಸೇವಾಭಧೃತೆ  ಒದಗಿಸುತ್ತದೆ ಎನ್ನುವುದು ನಮ್ಮ ಮುಂದಿರುವ ಮೂಲಭೂತ ಪ್ರಶ್ನೆ. ಈಗಿನ ಭಾರತೀಯ ವಿದ್ಯಮಾನದಲ್ಲಿ ಕಲಾಮಾಧ್ಯಮವನ್ನ ವೃತ್ತಿಯಾಗಿಸಿಕೊಂಡವರು ಬಹಳಷ್ಟು ಸಮಸ್ಯೆಗಳೊಂದಿಗೆ ಮುಖಾಮುಖಿಯಾಗುತ್ತಿದ್ದಾರೆ. ಅದು ರಂಗಭೂಮಿ ಇರಲಿ, ಸಿನಿಮಾ ಇರಲಿ ಅಥವಾ ಇನ್ನಾವುದೆ ಕಲೆಗಳಿರಲಿ; ಮೇಲ್ನೋಟಕ್ಕೆ ಸಮಸ್ಯೆಗಳು ಬೇರೆಯಾಗಿದ್ದರೂ ಅವುಗಳ ಮೂಲ ಸ್ವರೂಪ ಒಂದೆ. ಅದರಲ್ಲೂ ಮಹಿಳಾ ಕಲಾವಿದರ, ತಂತ್ರಜ್ಞರ ಸ್ಥಿತಿಯನ್ನ 50-60 ವರ್ಷ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಹೇಳುವಂತಹ ವ್ಯತ್ಯಾಸ ಕಾಣಸಿಗದು. ಕರ್ನಾಟಕದಲ್ಲಿ ಮಹಿಳಾ ರಂಗಕರ್ಮಿಗಳೆಂದು ಗುರುತಿಸಲ್ಪಡುವ ಕೆಲವೇ ಕೆಲವರು ನಿಲ್ಲಲು ಸಾಧ್ಯವಾಗಿದ್ದು ವ್ಯಕ್ತಿ ಸಾಮರ್ಥ್ಯದೊಂದಿಗೆ ಅವರ ಕೌಟುಂಬಿಕ ಹಿನ್ನಲೆಯಿಂದ ಎನ್ನುವುದನ್ನು ಮರೆಯುವ ಹಾಗಿಲ್ಲ. ಯಾವಾಗ ಇಡೀ ಸಮಾಜದ ದೃಷ್ಟಿ ಬದಲಾಗುತ್ತದೋ ಆಗ ಮಾತ್ರ ರಂಗಭೂಮಿಯಲ್ಲೂ ಹೊಸ ನೆಲೆ ಕಂಡುಕೊಳ್ಳಲು ಸಾಧ್ಯ. ಇದರ ಜೊತೆಜೊತೆಗೆ ವೃತ್ತಿಪರತೆ ಪ್ರತಿಯೊಬ್ಬ ರಂಗಕರ್ಮಿಯಲ್ಲಿ ಯಾವುದೇ ಬೇಧವಿಲ್ಲದೆ ಜಾಗೃತವಾದಾಗ ಮಾತ್ರ ಬದಲಾವಣೆ ಮತ್ತು ಬೆಳವಣಿಗೆ ನಿರಂತರವಾಗುತ್ತದೆ.  ಇಲ್ಲವಾದರೆ ಅದೇ ದೌರ್ಜನ್ಯ ದಬ್ಬಾಳಿಕೆ ಶೋಷಣೆ ನಿರಾತಂಕವಾಗಿ ಸಾಗುತ್ತದೆ.
                ಇದೆಲ್ಲಕ್ಕಿಂತ ಮುಖ್ಯವಾಗಿ ರಂಗಭೂಮಿ ಮಹಿಳೆಗೆ ಬೇರೆಯೇ ಆದ ಸಾಧ್ಯತೆ ನೀಡಿದೆ. ಅದೇನೆಂದರೆ, ಸಮಾಜ ಮಹಿಳೆಯನ್ನ ಕೆಲವು ಸ್ತ್ರೀ ಲಕ್ಷಣಗಳೊಂದಿಗೆ ಸಮೀಕರಿಸುತ್ತದೆ. ಅಂದರೆ, ಒಬ್ಬ ಮಹಿಳೆ ನಾಚಿಕೆ, ಮೃದುತ್ವ, ಸಹನೆ, ಸೌಂದರ್ಯ ಮುಂತಾದ ಗುಣಗಳನ್ನ ಹೊಂದಿರಬೇಕು ಎನ್ನುವುದು ಒಟ್ಟು ಸಮಾಜದ ಆಶಯ. ಮತ್ತು ಈ ಸಮಾಜ ಸ್ತ್ರೀಯನ್ನ ಸೌಂದರ್ಯಯುತ ವಸ್ತುವಾಗಿ ನೊಡಬಯುಸುತ್ತದೆ. ಆದರೆ ರಂಗಭೂಮಿ ಇದಕ್ಕೆ ವಿರುದ್ಧವೆನ್ನುವಂತೆ ಮಹಿಳೆಯ ಈ ಯಾವ ಗುಣಲಕ್ಷಣವನ್ನೂ ಬಯಸದೆ ಮಾನವತಾನೆಲೆಯಲ್ಲಿ ಸಮಾನತೆಯನ್ನ ಕಲ್ಪಿಸಿದೆ ಎನ್ನುವುದು ಹೇಳಲೇ ಬೇಕಾದ ಅಂಶ........
              ಇಲ್ಲಿ ಬಹಳಷ್ಟು ವಿಷಯಗಳನ್ನ ನಾನು ಪ್ರಸ್ತಾಪಿಸಿಲ್ಲ. ಹೇಳಹೊರಟರೆ ವಿಷಯದ ವ್ಯಾಪ್ತಿಗೆ ಕೊನೆಯೆ ಇಲ್ಲ. ನನ್ನ ಇತಿಮಿತಿಯಿಂದಾಗಿ ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ಈ ಬರವಣಿಗೆ ಬದಲಾವಣೆ ತರಬಲ್ಲದು ಎನ್ನುವ ಮೂಢನಂಬಿಕೆ ನನಗಿಲ್ಲ. ಆದರೆ ಈ ವಿಷಯ ಒಂದಿಷ್ಟು ಚರ್ಚೆಗೆ ಗ್ರಾಸವಾಯಿತೆಂದರೆ  ನನ್ನ ಈ ಪುಟ್ಟ ಕೆಲಸ ಸಾರ್ಥಕವಾದಂತೆ.

10 comments:

 1. http://kn.wikipedia.org/wiki/%E0%B2%B0%E0%B2%82%E0%B2%97%E0%B2%AD%E0%B3%82%E0%B2%AE%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF_%E0%B2%AE%E0%B2%B9%E0%B2%BF%E0%B2%B3%E0%B3%86%E0%B2%AF%E0%B2%B0%E0%B3%81

  ReplyDelete
  Replies
  1. Hi.... Due to Unicode problem your comment can't be read.... Please re write it by changing your settings.. Thank you :)

   Delete
  2. This is not comment.
   only link

   Delete
 2. ya its realy true and good.. ninu nataka thabala galge matra simithavadavanendukondide.. adare ninu barvanige allu saha ninade ada rithialli beleyutiruve andu kondiralilla.. rrealy great.. keep it up Brother....

  ReplyDelete
  Replies
  1. OH Thank you.. Nimma prothsaha sada irali ende bayasuve

   Delete
 3. neevu helodu nija anna.. esto kadeyalli mahileyara rangabhoomi aasaktige prootsaha dorakutilla.. maneyalle addanu niraakarisalaguttade.. karana.. halavarive..!! mahileyalli pratibhe iddaru adakke sukta vedhike dorakadantagide.. eenu kela kade mahile aa avakaasha padeuvudakkende bahalastu tyaga gallanu mada bekagide.. eddana avala doirbalya enna beko atava samajada yvavaste enna beko??.. neevu helidante.. samaajada drusti badalaadaaga matra yalladara badalavane saadhya!:)

  ReplyDelete
  Replies
  1. cinemadalli natiyaranna nodi kushi paduva jana, tanna mane ya hennu magalu natisuttene endare oppalararu. ello kelavu nagaragalalli ranagbhoomi yalli bhagavahisudakke oppige koduttare vinaha sanna putta halligalalli oorugalalli adakke bekaada pooraka vathavarana innu siddhavagilla. anta vathavarana srashti agodakke innu bahala prayathna madabekagide :)

   Delete
 4. very nice .. tumba chennagi barediddiri.. :) khanditavagiyu nimma baravanigeyinda sannadadaru uttama badalavane barali yendu nanna aashaya..

  ReplyDelete
  Replies
  1. Dhanyavadagalu :) nimma haraike sada heege irali endu aashisutthene...

   Delete