May 3, 2012

ನಾಗರೀಕ ಸಮಾಜದ ಸವಾಲುದಿನಬೆಳಗಾದರೆ ಬ್ರೆಡ್ ಬನ್ ಬಟರ್ ತಿಂದು, ಸೂಟು ಬೂಟು ಟೈ ತೊಟ್ಟು, ಧಾವಂತದಿಂದ ದಾಪುಗಾಲು ಹಾಕುತ್ತಾ, ಬಸ್ಸಿನಲ್ಲಿ ಜೋಲುತ್ತಾ, ಟ್ರಾಫಿಕ್ ಅಲ್ಲಿ ಜ್ಯಾಮ್ ಆಗಿ…. ಹೀಗೆ ಒಟ್ಟಿನಲ್ಲಿ ಹರಿ ಬರಿಯಲ್ಲಿ ಕಂಪೆನಿಯೆಡೆಗೆ ಒಡುವುದನ್ನೇ ರೂಢಿಮಾಡಿಕೊಂಡು ಅದೇ ಜಗತ್ತಿನ ಶ್ರೇಷ್ಟಕಾರ್ಯ ಎಂದು ಬೀಗುತ್ತಾ ಬಳಲುತ್ತಿದ್ದಾರೆ ಮಹಾನಗರಗಳ ಸತ್-ಪ್ರಜೆಗಳು.
ಕೆಲಸದ ಮಧ್ಯದ ಬ್ರೇಕ್ ನಲ್ಲಿ ಒಂದು ಕಪ್ ಚಹಾ ಮತ್ತು ಸಿಗರೇಟು ಹೀರುತ್ತಾ ಕೀಳು ಮನರಂಜನೆಯ ವಿಷಯವನ್ನ ಅಥವಾ ನಗರದಲ್ಲಿ ಆರಂಭಗೊಂಡ ಹೊಸ ಶೋಪಿಂಗ್ ಮಾಲ್ ಗಳ ಬಗ್ಗೆ ಇಲ್ಲವೇ ಪಬ್ಬು ಬಾರುಗಳ ಕುರಿತು ಅಮೋಘ ಭಾಷಣಮಾಡಿ ಮತ್ತದೆ ಪರಿದಿಯೊಳಗಿನ ಪರದೆಯನ್ನು ದಿಟ್ಟಿಸುತ್ತಾ ಸಾಗುವುದು ಈ ನಾಗರೀಕರ ಬದುಕು. ವಾರಾಂತ್ಯದಲ್ಲಿ ಇವರ ಚಿತ್ತ ಶಾಪಿಂಗ್ ನತ್ತ! ನಗರದ ಪ್ರಸಿದ್ಧ ಶಾಪಿಂಗ್ ಮಾಲ್ ಗಳಲ್ಲಿ ಇವರದ್ದೇ ಹಾವಳಿ. ತಿಂಗಳ ಅಷ್ಟೂ ಆದಯ ಹೋಗುವುದು ಆ ಮಾಲ್ ಗಳಿಗೆ. ಆಧುನಿಕತೆ ಸೋಗಿನಲ್ಲಿ ವ್ಯಾಜ್ಯ ಶೇಖರಣೆ! ತನ್ನ ಮುಂದಿನ ಜೀವನಕ್ಕೆ ಅಗತ್ಯವಿರುವ ಯಾವ ಉಳಿತಾಯಯನ್ನು ಮಾಡದೆ ಜಾಗತೀಕರಣದ ಕಪಿಮುಷ್ಟಿಯಲ್ಲಿ ಸಿಲುಕಿ ಹೊರಬರಲಾಗದೆ ಬೇಸತ್ತಿದ್ದಾರೆ ಮಾತ್ರವಲ್ಲ ಶಾಪಿಂಗ್ ಮಾಲ್ ಗಳ ಅಧಿಕೃತ ಪೋಷಕರಾಗುತ್ತಿದ್ದಾರೆ ಈ ಜನರು. ಹಲವರು ತಮ್ಮ ಮನೋಗತಿ ತಪ್ಪು ಎಂದು ತಿಳಿದ ಮೇಲೂ ಅದೇ ಕುರಿ ಮಂದೆಯಲ್ಲಿ ಒಂದಾಗಿ ಸಾಗುತ್ತಿದ್ದಾರೆ.
ಕೆಲವರಿಗೆ ತನ್ನ ಸಹೋದ್ಯೋಗಿಯ ಸಮಕ್ಕೆ ನಾನೂ ಬರಬೇಕು ಎನ್ನುವುದಕ್ಕಾಗಿ ಈ ಶೋಕಿ. ಇನ್ನು ಕೆಲವರಿಗೆ ಸಹೋದ್ಯೋಗಿ ತನ್ನ ಸಮಾನಕ್ಕೆ ಬರಬಹುದು ಎನ್ನುವ ಭಯ. ಒಂದೆಡೆ ಕಡಿಮೆಯಾಯಿತೆಂಬ ಭಾವನೆ, ಇನ್ನೊಂದೆಡೆ ಸಮನಾಗಬಾರದೆಂಬ ಭಾವ. ಒಟ್ಟಿನಲ್ಲಿ ಆಡಮ್ಸ್ ನ ಇಕ್ವಿಟಿ ಸಿದ್ಧಾಂತದ ಉದಾಹರಣೆಗಳೆಂಬಂತೆ ಭಾಸವಾಗುತ್ತಿರುವುದು ಮಾತ್ರ ಅಭಾಸ. ಕೆಲವರು ತಮ್ಮ ಸಹೋದ್ಯೋಗಿಯಿಂದ ಪ್ರೇರಿತರಾಗಿ ಅವರಂತೆಯೆ ನಾವೂ ಇರಬೇಕು ಎಂದು ಅಸಮಾನತೆಯಿಂದ ಸಮಾನತೆಯನ್ನು ಬಯಸುತ್ತಾರೆ. ಇತರರಿಂದ ಭಿನ್ನರೆನಿಸಿ ಕೊಂಡವರು ತಾವು ಭಿನ್ನರಾಗಿಯೆ ಇರಬೇಕು ಎನ್ನುವುದಕ್ಕಾಗಿ ಅಸಮಾನತೆಯನ್ನೇ ಬಯಸುತ್ತಾರೆ. ಆದರೆ ಎಲ್ಲಿ ಸಮಾನತೆ ಇರುವುದೋ ಅಲ್ಲಿ ಈ ಸಮಸ್ಯೆ ಇಲ್ಲ ಎನ್ನುತ್ತಾನೆ ಮನ:ಶಾಸ್ತ್ರಜ್ಞ ಆಡಮ್ಸ್. ಈ ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳಿಗೆ ಹಣವೇ ಎಲ್ಲದರ ಮಾಧ್ಯಮ. ಹಾಗಾಗಿ ಸಮಾನತೆಯನ್ನೂ ಹಣದ ಮೂಲಕವೇ ಅಳೆಯುವುದು ಇವರ ದುರಂತ. ಈ ಅತಿಯಾದ ವ್ಯಾಮೋಹವೇ ಈ ಎಲ್ಲಾ ಪರೀಸ್ಥಿತಿಯ ಮೂಲ.
ಇದಕ್ಕೆ ಪರಿಹಾರ ಎಂದರೆ ಮನೋರಂಜಾನಾ ಮಾಧ್ಯಮದ ಬದಲಾವಣೆ. ಕೀಳು ಅಭಿರುಚಿಯ ಮನರಂಜನೆ, ಶಾಪಿಂಗ್ ಹುಚ್ಚು ಹಾಗೂ ದುಶ್ಚಟಗಳಿಂದ ಹಿತಕರ ಮತ್ತು ಆಹ್ಲಾದಕರ ಭಾವನೆಯನ್ನ ಉತ್ತೇಜಿಸುವ ಮೌಲ್ಯಾಧಾರಿತ ಮನರಂಜನೆಯತ್ತ ಜನರನ್ನ ಕೊಂಡೊಯ್ಯಬೇಕು. ಬಿಡುವುಲ್ಲದೆ ಗೊಂದಲದ ಗೂಡಿನಂತಾಗಿರುವ ಮನಸ್ಸುಗಳಿಗೆ ಮುದ ನೀಡಿ ಸದೃಢಗೊಳಿಸಬೇಕಾಗಿದೆ ಹಾಗೂ ಉತ್ತಮ ಅಭಿರುಚಿಯನ್ನು ಬೆಳೆಸಬೇಕಾಗಿದೆ. ಇದು ಇಂದಿನ ಸಮಾಜ ಮತ್ತು ಕಲಾ ಮಾಧ್ಯಮದ ಎದುರಿರುವ ಬಹು ದೊಡ್ಡ ಸವಾಲು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಾನತೆಯೊಂದಿಗೆ ಮಾನಸಿಕ ಸ್ಥಿರತೆಯುಂಟಾದಾಗ ಮಾತ್ರ ನೆಮ್ಮದಿಯ ನಾಳೆ ನಮ್ಮದಾಗುತ್ತದೆ. ಭಾರತದ ಅಭಿವೃದ್ಧಿ ಸಾಧ್ಯವಾಗುತ್ತದೆ.

4 comments:

  1. neevu helodu sathya anna aadre ee badalavane beeku anta bayasuva nammanthavarige illi bele illadantagide alva?? namma aalochanegalanna keli tike maaduvavara sankhey jaasti ide,, bembalakke kammi jana!!! viparyasa aadare khatu oppa bekiru vanta sathya aste!

    ReplyDelete
    Replies
    1. Hmmm.. Elladakku para virodha idde iratte mattu adanna oppuva ondu gumpu idde iratte... Olleya kelsa kke sahakarisuvavara sankhye yavattu kadime ye... haagantha tale lekka haklikke agolla.. kelasa agle beku... iga nan obne e dise alli yochne madthidde.. iga nan jothe nivu serkondri.. heege namma hinde nammanna bembalisuva janagaliddare.. Aa moolaka obbarindobbarige vishaya vinimaya agtha hodre badalavane khanditha sadhya... adre modlu navu adakke baddharagirbeku ashte!

      Delete