May 2, 2012

ನಕ್ಷತ್ರ ನನ್ನ ಕವನ

ಕಾರ್ಮುಗಿಲ ಮಧ್ಯೆ ಕೆಂಪುಚುಕ್ಕಿ
ಸೆಳೆಯುತಿಹುದು ಕಣ್ಣ ಕುಕ್ಕಿ ಕುಕ್ಕಿ
ನೋಡುಗನ ಮನ ಸೆಳೆದು ಮನವನ್ನು ಬಿಗಿ ಹಿಡಿದು
ಕಾಂತಿಯನು ತುಂಬುವುದು, ಸಂತಸವ ಹಂಚುವುದು ಆ ಗಗನ ಚುಕ್ಕಿ


ಕಾರ್ಮೋಡ ತಿಕ್ಕಿ, ಆಗಸವು ಬಿಕ್ಕಿ
ಕಾಣದಾಯಿತು ಚುಕ್ಕಿ ಮರೆಯನ್ನು ಹೊಕ್ಕಿ
ಮತ್ತೆ ಬರುವೆಯಾ ಚುಕ್ಕಿ
ಮೈಮನವ ಮುದಗೊಳಿಸಿ ಸೆಳೆದುಕೊ ಮನದ ಹಕ್ಕಿಯನು ಮನವ ಹೊಕ್ಕಿ.


ಓ ನನ್ನ ರಕ್ತಗೆಂಪಿನ ಚುಕ್ಕಿ..... 
ರಕ್ತಕ್ರಾಂತಿಯ ನೆನೆವ ಕೆಂಪುಚುಕ್ಕಿ .......

6 comments:

  1. great going....all the very best..... :)

    ReplyDelete
  2. really good one sameera... u ve got literature and arts in ur blood.. karanthara aasthiyanna neenu munduvarisi khanditha belesthi.. :) all the best bro.. :)

    ReplyDelete
  3. Thank you very much:) I kindly request you to mention your name..... i can't identify you because the name is unknown... so please....

    ReplyDelete