Jun 15, 2011

ಸಮಯಪಾಲನೆ ಮತ್ತು ನಾವು


“ಅಯ್ಯೋ ಗಂಟೆ 8 ಆಯ್ತು! 8.30 ಕ್ಲಾಸ್ ಗೆ ಲೇಟ್ ಆಗತ್ತೆ. ಛೇ! ಬಾತ್ ರೂಮ್ ಕಾಲಿ ಇಲ್ಲ ಏನ್ ಮಾಡೋದು? ಲೇಟ್ ಆಯ್ತು, ಲೇಟ್ ಆಯ್ತು! ಲೇಟ್ ಆಯ್ತು….” ಇದು ವಿದ್ಯಾರ್ಥಿನಿಲಯಗಳಲ್ಲಿರುವ ನಮ್ಮಂಥಹ ಕಾಲೇಜು ಹುಡುಗರು ದಿನಾ ಬಳಸುವ ‘ಸಾಮಾನ್ಯ ಮಾತುಗಳು’.
ಏಳುವುದರಿಂದ ಹಿಡಿದು ಮಲಗುವ ವರೆಗೂ ಗಡಿಬಿಡಿಯಲ್ಲೇ ಕೆಲಸಮಾಡುವವರು ನಾವು. ರಾತ್ರಿ ಇಡೀ ಪಟ್ಟಾಂಗ ಹೊಡೆದೋ ಅಥವಾ assignment ಬರೆದೋ ತಡವಾಗಿ ಮಲಗುವ ನಮಗೆ ಎಚಚ್ಚರವಾಗೋದು ಸೂರ್ಯ ನಮ್ಮ ಕಣ್ಣು ಕುಕ್ಕಿದಾಗ ಅಥವಾ ರೂಮ್ ಗುಡಿಸುವ ಆಂಟಿ ಬಂದು ಬೈದು ಬಾಗಿಲು ತಟ್ಟಿದಾಗ. ಅಷ್ಟರಲ್ಲಿ ಸಮಯ ಕೈಮೀರಿ ದೂರ ಹೋಗಿರುತ್ತದೆ. ಸ್ನಾನ ಮಾಡುವ ಅಭ್ಯಾಸ ಇರುವವರಿಗೆ ಬಾತ್ ರೋಮ್ ಗೆ ಸಾಲಲ್ಲಿ ನಿಂತು ಮತ್ತೂ ಲೇಟ್. ಬಸ್ ಗಳೂ ಲೇಟ್. ಹಾಗಾಗಿ ಕ್ಲಾಸ್ ಗೂ ಲೇಟ್! ಈ ಲೇಟ್ ಗಳ ಮಧ್ಯೆ ಊಟತಿಂಡಿಯ ದರ್ಶನ ಆದ್ರೆ ವಿಶೇಷ. ಕ್ಲಾಸ್ ಮುಗಿದಮೇಲೆ practice, project work ಅದು ಇದು ಅಂತ ಹಾಸ್ಟೆಲ್ ಗೆ ಬರೋದು ಊಟ ಕಾಲಿಯಾದ ಮೇಲೆ. ಮನೆಯಿಂದ ತಂದಿರೊ ತಿಂಡಿ ಇದ್ರೆ ಅದು ಹೊಟ್ಟೆಯ ಪೂರ್ವಜನ್ಮದ ಪುಣ್ಯ.
ಈ ಕಾಲಕ್ಕೆ ‘ನಿಧಾನವೇ ಪ್ರಧಾನ’ ಅನ್ನೋ ಮಾತು ಹಳೇದು. ಎಲ್ಲಾ ಕೂಡ ಕ್ವಿಕ್, ಪಾಸ್ಟ್, ಬೇಗ. ಆದ್ರೆ ಈ ವೇಗದ ಬದುಕಿನಲ್ಲಿ ಸಮಯಪಾಲನೆ ಮರೆಯಾಗ್ತಿದೆ. ಸರಿಯಾದ ಸಮಯದಲ್ಲಿ ಏನು ಆಗ್ತಾ ಇಲ್ಲ. ಊಟ, ತಿಂಡಿ, ನಿದ್ದೆ, ವಿಶ್ರಾಂತಿ, ಓದು, ಮನೋರಂಜನೆ ಎಲ್ಲದಕ್ಕೂ ಸಮಯದ ಅಭಾವ ನಮಗೆ! ತಡ ಆಯ್ತು ಅಂತ ಹೊಟ್ಟೆ ಮೋಸಮಾಡುವುದು ಸರಿನಾ? ದೇಹ ದಂಡಿಸೋದು ಸರೀನಾ?
          ಆದ್ರೂ ದಿನವಿಡಿ ಬಿಸಿ ಬಿಸಿಯಾಗಿ busy ಆಗಿರೋದ್ರಲ್ಲಿರೊ ಮಜಾನೆ ಬೇರೆ ಕಣ್ರಿ…

No comments:

Post a Comment