May 21, 2011

ಜೀವನ ನದಿ

ಎಲ್ಲೊ ಹುಟ್ಟಿ ಎಲ್ಲೊ ಬೆಳೆದು ಸಾಗರ ಸೇರುವ ಪುಟ್ಟ ನದಿ
ಕಲ್ಲು ಬಂಡೆಗಳ ಜೊತೆ ಗುದ್ದಾಡುತ್ತಾ ನೋವನ್ನು ತಿನ್ನುತ್ತಿತ್ತು ಆ ನದಿ
ಏಕಾಂಗಿಯಾಗಿ ಹರಿಯುತ್ತಿದ್ದ ಆ ನದಿಗೆ ಸೇರಿತೊಂದು ಉಪನದಿ
ಜೊತೆಯಾಯ್ತು ಎಲ್ಲಾ ನೋವುನಲಿವಿಗೆ, ಕಷ್ಟ ಸುಖಗಳಿಗೆ ಜೀವನದಿ
ಯಾವುದೆ ಕಲ್ಲುಬಂಡೆಗಳಿಗೆ ಹೆದರದೆ, ಎಲ್ಲೂ ಕುಗ್ಗದೆ
ಜೊತೆಗೂಡಿ ಆದವು ಜೀವ ನದಿ
ಹೊಸ ಹಾದಿಯ ಮುನ್ನುಡಿ.. ಜೊತೆಜೊತೆಯಾಗಿ ಲೀನವಾದವು ಸಾಗರದಿ
ಪುಟ್ಟನದಿ ಜೊತೆ ಉಪನದಿ...

No comments:

Post a Comment