May 24, 2011

ಓ ಮನುಷ್ಯನೇ...

ಮನದಾಳದಲ್ಲಿ ಹುದುಗಿಹ ನೋವಿನ ಸಮಾಧಿಯ ಮೇಲೆ
ಕೆತ್ತಿದ ನಗುವಿನ ರೇಖೆಯ ಅಳಿಸಿ
ಅದೇ ಗೋರಿಯ ಅಗೆದು ಇನ್ನೊಂದಿಷ್ಟು ಹೆಣಗಳ ತುಂಬಿ
ಕಲ್ಲಿನ ಹಾಸು ಹೊದೆಸಿದ ಓ ಕ್ರೂರಿ ಮನುಷ್ಯನೇ...
ನಿನಗಿದೊ ಸಾವಿನ ನಮನ
ಇದರ ನೆನಪಿಗಾಗಿಯೇ ಈ ಕವನ
ಯಾವಾಗ ಇದನ್ನ ನನ್ನ ಸಮಾಧಿಯ ಮೇಲೆ ಕೆತ್ತುವೆನೋ
ಅದೆ ನನ್ನ ಕೊನೆಯ ದಿನ...

No comments:

Post a Comment