May 15, 2011

ಇತಿಹಾಸ

ಅಗೊ ಅಲ್ಲಿಹುದು ಪುರಾತನ ಸ್ಮಾರಕ
ರಾಜಾದಿ ರಾಜರ ವಿಜಯದ ಸೂಚಕ
ಆದರೆ ಅದರಡಿಯಲ್ಲಿರುವುದು ಘೋರ ನರಕ
ಹರಿದಿತ್ತು ರಕ್ತದ ಹೊಳೆ ಉರುಳಿತ್ತು ಸಾವಿರಾರು ತಲೆ
ಆ ದೃಶ್ಯಗಳು ಇಂದಿಗೂ ರುದ್ರ ಭಯಾನಕ


ಈ ಸ್ಮಾರಕ ಎಲ್ಲಿಯ ತನಕ?
ಇನ್ನೊಂದು ಮಹಾಬಲಿ ಆಗುವ ತನಕ
ತದ ನಂತರ ಇರುವುದನ್ನು ಕೆಡವಿ ತಲೆ ಎತ್ತುವುದು
ರಕ್ತಸಿಕ್ತ ಹೊಸ ಸ್ಮಾರಕ..
ವಿಜಯದ ಸೂಚಕ!

No comments:

Post a Comment